ವಿಧಾನಸಭೆ ಚುನಾವಣೆಗೆ ಇನ್ನೂ ಕೇವಲ 8-9 ತಿಂಗಳಿರುವಾಗಲೂ ರಾಜ್ಯ ಬಿಜೆಪಿಯಲ್ಲಿ ಗೊಂದಲ, ತಳಮಳ ಮುಂದುವರೆದಿದೆ. ರಾಜ್ಯಕ್ಕೆ ಅಮಿತ್ ಶಾ ಬಂದು ಹೋದ ಮೇಲೆ ಸಿಎಂ ಬದಲಾವಣೆ ಆಗಲಿದೆ ಎಂಬ ಪುಕಾರು ಬಿಜೆಪಿಯೊಳಗಿಂದಲೇ ಜೋರಾಗಿ ಕೇಳಿಬರ್ತಿದೆ. ಶಾಸಕರು, ಮುಖಂಡರ ಮಟ್ಟದಲ್ಲಿ ಸಿಎಂ ಕಥೆ ಏನು ಎಂಬ ಗುಸುಗುಸು ಚರ್ಚೆ ನಡೀತಿದೆ. ಆದ್ರೆ, ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಸೇರಿದಂತೆ, ಬಹುತೇಕ ಸಚಿವರು ಮುಖ್ಯಮಂತ್ರಿ ಬದಲಾವಣೆ ವದಂತಿ ಅಲ್ಲಗಳೆದಿದ್ದಾರೆ. ಆದ್ರೆ, ಕಾಂಗ್ರೆಸ್ ಇನ್ನಷ್ಟು ತುಪ್ಪ ಸುರಿದು ರಾಜಕೀಯವಾಗಿ ಅಟ್ಯಾಕ್ ಮಾಡಿದೆ. ಇನ್ನು, ಬಿಜೆಪಿಯಲ್ಲಿ ಸಿಎಂ ಬದಲಾವಣೆ ವದಂತಿ ಮತ್ತು ಗೊಂದಲಗಳನ್ನೇ ಲಾಭ ಮಾಡಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ಬಿಜೆಪಿ ಗೊಂದಲವನ್ನೆ ಅಸ್ತ್ರವಾಗಿಸಿಕೊಂಡು ಬಿಜೆಪಿಗೆ ಮುಜುಗರ ತಂದಿಟ್ಟಿದೆ. ಇಂತಹ ವಿಚಾರಗಳನ್ನೆ ಇಟ್ಟುಕೊಂಡು ಬಿಜೆಪಿ ವಿರುದ್ಧ ರಾಜಕೀಯ ಅಸ್ತ್ರ ಬಳಕೆಗೆ ಕಾಂಗ್ರೆಸ್ ತಂಡವೊಂದನ್ನೇ ಸಿದ್ಧಪಡಿಸಿದೆಯಂತೆ. ಬಿಜೆಪಿಯಲ್ಲಾಗುವ ಗೊಂದಲಗಳ ಬಗ್ಗೆ ಕಣ್ಣಿಟ್ಟು, ವಿವಾದಗಳನ್ನ ಸರಿಯಾಗಿ ಟ್ರಾಕ್ ಮಾಡಿ, ಅಗತ್ಯ ಬಿದ್ದಲ್ಲಿ ನಾಯಕರ ಮೂಲಕ ಇಲ್ಲವೇ ಸೋಶಿಯಲ್ ಮೀಡಿಯ ಮೂಲಕ ಕೌಂಟರ್ ಮಾಡಿಸುವುದು ಈ ತಂಡದ ಕೆಲಸ. ಸಿಎಂ ಬದಲಾವಣೆ ಕೌಂಟರ್ ಮಾದರಿಯಲ್ಲೆ ಮುಂದಿನ ದಿನಗಳಲ್ಲಿ ಭರ್ಜರಿ ಕೌಂಟರ್ ಕೊಡಲು ಕೈ ಪಾಳಯ ಮುಂದಾಗಿದೆ ಅಂತಲೂ ತಿಳಿದು ಬಂದಿದೆ.
#publictv #newscafe #hrranganath